Thursday, December 27, 2012


ನಾನು ನೀನು ಸೇರುವ
ದಾರಿಯೆಲ್ಲಿದೆ?
ನಡೆದು ನಡೆದೂ
ನನಗೆ ಸುಸ್ತಾಗಿದೆ

ನಾನು ನೀನು ಹೋಗುವ
ಗಮ್ಯವೆಲ್ಲಿದೆ
ಕಣ್ಣಿದ್ದು ಕಾಣದೆ
ನೋಟ ಮಂಕಾಗಿದೆ

ನಾನು ನೀನು ಮಾಡುವ
ಕೆಲಸವೇನಿದೆ
ಸುಮ್ಮನೆ ಪ್ರೀತಿಸುತ್ತಾ
ಇದ್ದರೆ ಸಾಲದೇ

ನಾನು ನೀನು ಏನೇನು
ಸಾಧಿಸಬೇಕಿದೆ
ಉಸಿರಿರುವ ತನಕ
ಜೊತೆಗಿದ್ದರೆ ಆಗದೇ

ನಾನು ನೀನು ಏಕೆ
ಬದುಕಬೇಕಿದೆ
ನಿಯಮತಪ್ಪಿ ನಡೆದರೆ
ವಿಧಿ ಅದ ಒಪ್ಪುವುದೇ

ನಾನು ನಿನ್ನ ನೀನು ನನ್ನ
ಪ್ರೀತಿಸುವುದೇನಿದೆ
ಅಯ್ಯೋ ಇಲ್ಲದಿದ್ದರೆ
ಬದುಕುವ ಹಕ್ಕು ನಮಗೆಲ್ಲಿದೆ



ಗೆಳೆಯ,
ಮೋಹನ್ ಕುಮಾರ್ ಡಿ ಎನ್







Wednesday, December 26, 2012

ಕನಸೊಂದು ಕಟ್ಟಿಹೆನು 
ನಿಮಗೂ ಪಾಲಿದೆ ಅದರಲ್ಲಿ 
ಏನು ಮಾಡಲಿ ಹೇಳಬಲ್ಲಿರೇನು 
ಮುಳುಗಿಹೆನು ತೇಲದೆ ಆಳದಲ್ಲಿ ..

ಕನಸೊಂದು ಕಾಣುತಿಹೆನು 
ನೋಡುವಿರೇ ನೀವದನು 
ದಯವಿಟ್ಟು ಕ್ಷಮಿಸಿ 
ಹಂಚಲಾರೆನು ಅದೇನನು..

ಕನಸಸೊಂದು ಕಣ್ತುಂಬಿದೆ 
ಬನ್ನಿ ಸ್ವಲ್ಪ ಇಳಿಸಿ ಭಾರವನು 
ಜೋಪಾನ ಘಾಸಿಯಾದೀತು 
ಬಿಡಲಾರೆ ನಾನಾಗ ಕಣ್ಣನು..

ಕನಸಸೊಂದು ಕಾಡುತಿದೆ 
ಇಂಪಾದ ಅಲೆಯಂತೆ 
ಸುಮ್ಮನಿರಿ ಸಾಕು 
ಸರಿದೀತು ಗಾಳಿಯಂತೆ..

ಗೆಳೆಯ,
ಮೋಹನ್ ಕುಮಾರ್ ಡಿ ಎನ್ 


ಹಲೋ ಗೆಳೆಯರೇ ನಮಸ್ಕಾರ.

ನನ್ನ ಕೆಲವೊಂದು ಅನಿಸಿಕೆಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವೇ ಈ ಲೇಖನ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಧನ್ಯ.

ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಇವತ್ತಿಗೆ ಇರುವ ಸ್ಥಾನಮಾನ ಏನೆಂದು ಹುಡುಕುತ್ತಾ ಹೋದರೆ ಮನಸ್ಸಿಗೆ ಬೇಜಾರಾಗುವುದು ಖಂಡಿತ. ಐತಿಹಾಸಿಕ ಪಾರಂಪರೆವುಳ್ಳ ನಮ್ಮ ಈ ನಾಡು, ನುಡಿ, ಜನ, ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ರೀತಿ ರಿವಾಜು...ಸುಮ್ಮನೇ ಬಂದಿಲ್ಲ, ತಂತಾನೆ ಆಗಿದ್ದಲ್ಲ, ಯಾರೂ ಬೇಕಂತ ಮಾಡಿಟ್ಟಿದ್ದಲ್ಲ, ಎಲ್ಲಿಂದಲೋ ನೋಡಿ ಕಲಿತದ್ದಲ್ಲ - ಅದಕ್ಕೆ ತನ್ನದೇ ಆದ ದಾರಿಯಿದೆ, ನೆಲೆಯಿದೆ, ಆಯಾಮವಿದೆ. ಯಾರೋ ಬೇಡವೆಂದು ಬಿಸಾಡಿ ಹೋದ ನುಡಿಯಲ್ಲ ನಮ್ಮದು - ಅದಕ್ಕೆ ತನ್ನದೇ ಆದ ಮಜಲಿದೆ, ತಿರುವಿದೆ, ಹಿನ್ನೆಲೆಯಿದೆ. ಹೀಗಿರುವಾಗ ನಮ್ಮತನವನ್ನು ಬಿಟ್ಟುಕೊಟ್ಟು    ಬೇರೆಯವರು ಉಳಿಸಿಹೋದ ಭಾಷೆಯನ್ನು ಮಹಾಪ್ರಸಾದವೆಂಬಂತೆ ತಿನ್ನುತ್ತಿರುವ ನಮಗೆ ಅದು ನಾಚಿಕೆಗೇಡಿನ ವಿಷಯ ಎಂದು ಅರಿವಾಗುವುದಾದರೂ ಯಾವಾಗ?.

ನೋಡಿ ಸುಮ್ಮನೆ ಹೇಳ್ತಾಹೋಗ್ತಿನಿ : ಮಗು ಹುಟ್ಟಿದ ಕೂಡಲೆ ಅನ್ನುವುದು ಅಮ್ಮಾ ಅಂತ. ಅದು ಬದಲಾಗಿದೆ, ಈಗ ಅದು ಮಮ್ಮೀ ಅನ್ನುತ್ತೆ. ಹಾಗನ್ನದಿದ್ದರೆ ಹೆತ್ತವರಿಗೆ ಪಾಪ ಏನೋ ಕಳೆದುಕೊಂಡಂತೆ. ಅಪ್ಪನ ಬದಲು ಡ್ಯಾಡಿ, ಚಿಕ್ಕಮ್ಮ ಚಿಕ್ಕಪ್ಪ /ದೊಡ್ಡಮ್ಮ / ದೊಡ್ಡಪ್ಪನ  ಬದಲು ಆಂಟೀ ಆಂಕಲ್, ಅಣ್ಣತಮ್ಮ ಅಕ್ಕತಂಗಿಗೆ ಬ್ರದರ್ ಸಿಸ್ಟರ್, ಇನ್ನು ದಿನಬಳಕೆ ಮಾತುಗಳಂತೂ ಆಹಾಹಾ! ಕೇಳಲು ಬರೀ ಎರಡು ಕಿವಿ ಸಾಲದುರೀ - ಬಾಡಿಗೆಗೆ ಬೇರೆಯವರ ಕಿವಿ ಸಿಗುವಹಾಗಿದ್ದರೆ ಕಡತಂದು ಕೇಳಬೇಕು - ಹಾಗಿರುತ್ತದೆ ಅವರ ದಿನ ಕನ್ನಡ ಬಳಕೆ. ಇದೆಲ್ಲವೂ ಸಾಲದಂತೆ ಮಾಧ್ಯಮಗಳ ಹಾವಳಿ ಬೇರೆ! ಎಲ್ಲಿ ಹೋದವು ರಾಮಾಯಣ ಮಹಾಭಾರತ ಕಥೆಗಳು? ಅದನ್ನು ನೋಡುವರು ಯಾರಿದ್ದಾರೆ? ಪ್ರತಿ ಮನೆಯ ಚಾನೆಲ್ನಲ್ಲೂ ಟಾಮ್ ಜೆರಿ ಬಂದು ಕುಳಿತಿದ್ದಾನೆ. ಮಿಕ್ಕಿ ಮೌಸ್ಗಳು ನೋಡದೇ ಇರುವ ಮಕ್ಕಳೆಲ್ಲಿದ್ದಾರೆ? ರಿಮೋಟ್ ಒತ್ತಿದರೆ ಸಾಕು ಕಾರ್ಟೂನ್ ನೆಟ್   ವರ್ಕ್, ಪೋಗೋ, ನಿಕ್..ಬರೀ ಇಂಥವೇ. ನಮ್ಮ ಮಕ್ಕಳಿಗೆ ಇದನ್ನೆಲ್ಲಾ ನೋಡುವುದರಿಂದ ಮನರಂಜನೆಯೇನೋ ಸಿಗುತ್ತದೆ ಆದರೆ ಬುದ್ಧಿ ಬೆಳವೆಣಿಗೆಯಾಗುತ್ತದೆಯೇ? ಮಾನಸಿಕವಾಗಿ ಸಮಚಿತ್ತದಿಂದಿರುವರೇ?

ಹೆತ್ತ ತಂದೆತಾಯಿಗಳು ಇದನ್ನು ಯೋಚಿಸುವುದೇ ಇಲ್ಲ.

ನಮ್ಮ ಮನೆಯ ಮಕ್ಕಳು ಏನಾಗಬೇಕೆಂದು ಯೋಚಿಸುತ್ತೆವೆಯೇ ಹೊರತು ಏನಾಗಿದ್ದಾರೆ ಎಂದು ಕುತೂಹಲಕ್ಕಾದರು ತಿಳಿಯುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

ನಮ್ಮ ಮನೆಯ ಮಕ್ಕಳನ್ನು ಪಕ್ಕದ ಮನೆಯ ಮಕ್ಕಳ ಜೊತೆ ಹೋಲಿಕೆಮಾಡಿ ನೀನೂ ಅವನಂತಾಗಬೇಕೆಂದು ಹೇಳುತ್ತೇವೆಯೆ ಹೊರತು ನೀನು ನೀನಾಗಿಯೇ ಬೆಳೆಯಬೇಕೆಂದು ಮಾತಿಗಾದರೂ ಹೇಳುವುದಿಲ್ಲ.

ಕ್ಲಾಸ್ನಲ್ಲಿ ಎಲ್ಲರ ಜೊತೆ ನೀನು ಇಂಗ್ಲಿಷಲ್ಲೇ ಮಾತಾಡಬೇಕೆಂದು ಫಾರ್ಮಾನು ಹೊರಡಿಸುತ್ತೇವೆಯೆ ಹೊರತು, ನಿನ್ನತನ ನೀನು ಬಿಡದೇ ಎಲ್ಲಿ ಬೇಕೋ ಅಲ್ಲಿ ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಮಾತಾಡಿ ಮಿಕ್ಕೆಲ್ಲಾ ಸಮಯದಲ್ಲಿ ಕನ್ನಡದಲ್ಲಿ ಮಾತಾಡು ಅಂತ ನಾವು ನಮ್ಮ ಮಕ್ಕಳಿಗೆ ಹೇಳುವುದೇ ಇಲ್ಲ.

ಸಮಸ್ಯೆಯ ಮೂಲ ಮಕ್ಕಳಲಿಲ್ಲ, ಅದು ಇರುವುದೇ ನಮ್ಮಲ್ಲಿ - ತಂದೆತಾಯಿಗಳಲ್ಲಿ. ಇನ್ನು ಪಾಪ ಆ ಮಕ್ಕಳಾದರೂ ಏನು ಮಾಡಿಯಾವು?

ಕನ್ನಡದ ಬಗ್ಗೆ ಮೊದಲು ನಮ್ಮಲ್ಲಿ ಪ್ರಜ್ಞೆ ಬರಬೇಕು, ಅರಿವು ಮೂಡಬೇಕು. ಇಷ್ಟಕ್ಕೂ ನಾವು ಹುಟ್ಟಿದಾಗ ಏನು ಮಾತಾಡುತ್ತಿದೆವು ಯೋಚಿಸಿನೋಡಿ? ನಮ್ಮ ಮಾತೃ ಭಾಷೆ ಕನ್ನಡವನ್ನೇ ತಾನೇ? ನಾವ್ಯಾಕೆ ಇಂಗ್ಲಿಷ್ ಹುಳುಗಳಾಗಲಿಲ್ಲ? ನಾವು ಮಾಡದ್ದು ನಮ್ಮ ಮಕ್ಕಳಿಗೆ ಮಾಡೆಂದು ಹೇಳುವ ಕಡ್ಡಾಯವಾದರೂ ಯಾಕೇ? ಭೌದ್ದಿಕ ಬೆಳವಣಿಗೆಗೆ ಇಂಗ್ಲಿಷ್  ಬೇಕೆಂದಾದರೆ ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿತೇ ಕಲಿಯುತ್ತಾರೆ ಬಿಡಿ. ನಾವಾದರು ಅಲ್ಪ ಸ್ವಲ್ಪ ನಮಗೆ ಬುದ್ದಿ ಬಂದಮೇಲೆ ತಾನೇ ಕಲಿತದ್ದು?

ಮೊದಲು ನಮ್ಮ ಮನೆಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು - ಕನ್ನಡ ಮಾತಾಡುವ ಮೂಲಕ, ಕನ್ನಡದ ಪುಸ್ತಕ ಪತ್ರಿಕೆ ತಂದು ಓದುವುದರ ಮೂಲಕ, ಅಕ್ಕಪಕ್ಕದವರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ, ನಮ್ಮ ಮಕ್ಕಳಿಗೆ ಕನ್ನಡ ನಾಡುನುಡಿಯ ಬಗ್ಗೆ ಹೇಳುವ ಮೂಲಕ, ಪರಭಾಷೆ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳುವ ಮೂಲಕ, ಹಿತ್ತಲಗಿಡ ಮದ್ದಲ್ಲ ಎಂದು ತಾತ್ಸಾರ ತೋರದೆ ನಮ್ಮ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಕಟ್ಟುವ ನಿರಂತರ ಕಾಯಕ ಮಾಡುವ ಮೂಲಕ.

ಅದು ಆಗೇ ಆಗುತ್ತದೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗುತ್ತಾನೆ, ನಮ್ಮ ಕನ್ನಡ ಸೂರ್ಯಚಂದ್ರರಿರುವ ತನಕ ಅಜರಾಮರವಾಗಿರುತ್ತದೆಯೆಂದು ನಂಬುತ್ತ ನನ್ನ ಅನಿಸಿಕೆಯನ್ನು ಮುಗಿಸುತ್ತಿದ್ದೇನೆ.

ಜೈ ಕನ್ನಡಮಾತೆ ಭುವನೇಶ್ವರಿ.

ವಂದನೆಗಳೊಂದಿಗೆ,

ಗೆಳೆಯ,
ಮೋಹನ್ ಕುಮಾರ್ ಡಿ ಎನ್









Monday, December 24, 2012


Dear Frineds,

Some of the interesting facts about our "Kannada"

About Kannada Language
Kannada is the third oldest language of India. ( After Sanskrit & Tamil )
Kannada is as old as 2000 years.
Kannada is 99.99% perfect - logically and scientifically.
Kannada Has got 7 Gnana Peetha Awards.
Shri VINOBA BHAVE called Kannada script as QUEEN OF WORLD SCRIPTS
- "Vishwa LipigaLa RaaNi - " “
 ”
So called International language -- English does not have its own Script.
English is written in "ROMAN"
So called National Language -- Hindi does not have its own script.
Hindi is written in "Deva naagari"
Though Tamil has a script, logically it is imperfect -- as common
letters are used for many pronunciations.
Kannada is as old as 2000 years. You can write what you speak and
you can read what you write- It is phonetic.
When "Kaviraja Maarga
was written . . ." kaavEriyiMda,
gOdaavarivaregirpa . .." by Amogha Varsha
Nripathunga,
English was in cradle & Hindi was not born at all.
Kannada Is the only Indian language for which a foreigner (Kittal) wrote
a dictionary (Shabda Kosha)
Ragale Sahitya can be seen only in Kannada which is of a rare and
different kind of literature.
Number of literature awards KUVEMPU got, was highest among any Indian
authors.
Kannada Chandassu (shatpadis) out pared all other languages
So Let us have PRIDE in using Kannada .
Be proud of being a KANNADIGA
Forward this to all your friends and let them also are PROUD to be
KANNADIGAS...
"SIRIGANNADAM GELGE"

Kannada is Unique/extra ordinary Language.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಗೆಳೆಯ -
ಮೋಹನ್ ಕುಮಾರ್ ಡಿ ಏನ್

Friday, December 21, 2012

Hi Friends,
Gud Morning..

Todays' post is again DVG's "Kagga"

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು ।
ಹಾಲೊಡೆಯೆ ಕಡೆದದನು ತಕ್ರವಾಗಿಪುದು ॥
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು ।
ಬಾಳಿಗಿದೆ ಚಿರಧರ್ಮ - ಮಂಕುತಿಮ್ಮ ॥ 

Always I would like to read DVG's "Kagga" , it gives different experience every time as and when I read. Try to read it atleast one "Kagga" every day, I am sure, your life style will change towards goodness. Make it habbit, your thinking will change, make it routine your views will upgrade you next. "Kagga" means Story / Kategalu.

Regards,
Mohan Kumar DN

Thursday, December 20, 2012

Hi Friends,
This is my first post in the blog and wish it would be best one too. Becasue of this reason I choose to send first post which is related to Kannada. Please read the one of the below lines from the book "Mankutimmna Kagga" written by Devanahalli Venkataramanaiah Gundappa - simply DVG.

"ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ?
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು?
ಅಚ್ಚರಿಯ ತಂತ್ರವಿದು; ಬ್ರಹ್ಮಸೃಷ್ಟಿಗಳೇಕೊ ।
ಮುಚ್ಚಿಹವು ಸಾಜತೆಯ - ಮಂಕುತಿಮ್ಮ "॥


Please expect some other posts shortly.

Regards,

Mohan Kumar DN

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...