ಹೈವೇ ...
ನಮ್ಮ ಹೊಲದಲ್ಲಿ ಎತ್ತ ನೋಡಿದರೂ ಹಸಿರಸಿರಿ ತುಂಬಿ ತುಳುಕುತ್ತಿತ್ತು. ಸದಾಕಾಲ ಅಲ್ಲಿ ಕೂಲಿಯಾಳುಗಳು ಕೆಲಸ ಮಾಡಿತ್ತಿದ್ದರು. ಆ ಕೆಲಸದ ಹೊತ್ತಿನಲ್ಲಿ ಆಳುಗಳು ನೂರಾರು ಹಾಡು ಹಾಡಿಕೊಳ್ಳುತ್ತಾ, ಹಾಡಿಗೆ ಹಾಡು ಕಟ್ಟುತ್ತಾ, ಮಾತಿಗೊಂದು ಮಾತಿನ ಮುತ್ತು ಸುರಿಸುತ್ತಾ ಕೆಲಸ ಮಾಡುತ್ತಿದ್ದರು. ಆಗ ಕೇಳಿದ ಹಾಡುಗಳು ನನ್ನ ಸ್ಮ್ರುತಿಪಲ್ಲಟದಲ್ಲಿದೆ, ಅವರ ಅನುಭವದ ಮಾತುಗಳೇ ನನಗೆಷ್ಟೋ ಬಾರಿ ಎದುರಿನವನ ಮಾತಿನ ದೊಣ್ಣೆಯಿಂದ ತಪ್ಪಿಸಿದೆ. ಅಪ್ಪ ಆಳುಗಳನ್ನು ಆಳಿನಂತಾಗಲಿ, ಕೆಲಸಗಾರರಂತಾಗಲಿ ನೋಡಿದ್ದೇ ಇಲ್ಲ ; ಸ್ವಂತ ಬಂಧುಗಳಂತೆ ನೋಡಿಕೊಳ್ಲುತ್ತಿದ್ದರು. ಅವರಾದರೂ ಸರಿ ಹಾಗೇ ಇರುತ್ತಿದ್ದರು.
ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ದೇವಸ್ಥಾನವಿತ್ತು ; ತಾಯಿ ಚೌಡೇಶ್ವರಿಯದು. ಆಕೆ ನಮ್ಮ ಕುಲ ಹಾಗು ಊರದೇವತೆ. ಪ್ರತಿ ಸಾಯಂಕಾಲ ಅಲ್ಲಿ ಭಜನೆ, ಹರಿಕಥೆ, ಪೂಜೆ, ಪ್ರಸಾದ ವಿನಿಯೋಗವಿರುತ್ತಿತ್ತು. ಊರ ಜನರೆಲ್ಲಾ ಅಲ್ಲಿ ಸೇರಿದರೆ ಭಕ್ತಿ ಮೈನವಿರೇಳಿಸುತ್ತಿತ್ತು.
ಲೋಕಸೇವಾನಿರತರೊಬ್ಬರು ಕಟ್ಟಿಬೆಳೆಸಿದ ಶಾಲೆಯಲ್ಲೇ ನನ್ನ ವಿದ್ಯಾಭ್ಯಾಸ ನಡೆದಿದ್ದು,, ಶಾಲೆ ದೇವಸ್ಥಾನದ ಎದುರಿನಲ್ಲೇ ಇದೆ. ಆ ಶಾಲೆಯಲ್ಲಿ ನಾವು ಕಲಿತ ಅಕ್ಷರಗಳೇ ಇಂದು ನನ್ನನ್ನು ರೂಪಿಸಿರುವುದು. ಅಲ್ಲಿಂದ ಮುಂದೆ ನಡೆದರೆ ಸಿಗುವುದೇ ನಮ್ಮ ಹಳ್ಳಿಯ ಜೀವನದಿ ನಾಗರಕೆರೆ. ಒಂದು ಕಾಲಕ್ಕೆ ವರ್ಷ ವರ್ಷ ಭರ್ತಿ ಕೋಡಿ ಬೀಳುತ್ತಿತ್ತು, ನಮಗದನ್ನು ನೀಡುವುದೇ ಒಂದು ಸಂಭ್ರಮ. ನಾವಲ್ಲಿ ಒಂದಷ್ಟು ಹುಡುಗರು ಗುಂಪು ಸೇರಿ ಈಜುತ್ತಿದ್ದೆವು, ಸಾಲದ್ದಕ್ಕೆ ಪಕ್ಕದಲ್ಲೆ ತೋಟದ ಮನೆಯಲ್ಲಿದ್ದ ಭಾವಿ ಬೇರೆ ನಮ್ಮ ಈಜಿಗೆ ಸಾಥ್ ಕೊಡುತ್ತಿತ್ತು. ನೀರಿಗೆ ಬಿದ್ದರೆ ಮೇಲೇಳುವುದು ಅದೆಷ್ಟೋ ಹೊತ್ತಾದ ಮೇಲೇ.
ಇಂತಿಪ್ಪ ಹಳ್ಳಿಗೆ ಹರಳೀಕಟ್ಟೆ ಇಲ್ಲದಿದ್ದರೆ ಆದೀತೇ? ದೇವಸ್ಥಾನದಿಂದ ನಾಲ್ಕೆಜ್ಜೆ ಹಾಕಿದರೆ ಸಿಗುವುದೇ ನ್ಯಾಯಸ್ಥಾನ ; ತಪ್ಪು ಮಾಡಿದವರಿಗೆ, ಕಾಲಹರಣ ಜಾಗ; ಹಳ್ಳಿಯ ಹಿರಿಯರಿಗೆ, ಚಿಕ್ಕಮಕ್ಕಳಿಗೆ ಆಟದ ಸ್ಥಾನ...ಹೀಗೆ ಅಲ್ಲಿ ಒಂದಾನೊಂದು ಚಟುವಟಿಕೆ ನಡೆಯುತ್ತಲೇ ಇರುತ್ತಿತ್ತು.
ಹೀಗೆ ಹೇಳುತ್ತಾ ಹೋದರೆ ನಮ್ಮ ಹಳ್ಳಿಯ ಬಗ್ಗೆ ನೂರುಪುಟ ಹೇಳಬಹುದು. ಎಲ್ಲಾ ಸರಿ, ನಮ್ಮ ಮನೆಯ ಬಗ್ಗೆಯೇ ಹೇಳಲಿಲ್ಲವಲ್ಲಾ? ಅದೋ ನೋಡಿ ಹರಳೀಕಟ್ಟೆ ದಾಟಿ ಮುಂದಕ್ಕೆ ನಡೆದರೆ ಎದುರಿಗೆ ಕಾಣುವ ಜಾಗ ಇದೆಯಲ್ಲಾ? ಅಲ್ಲಿದೆ ನಮ್ಮನೆ!! ನಮ್ಮ ಹಿರಿಯರು ಬಾಳಿಬದುಕಿ ನಮಗಾಗಿ ಬಿಟ್ಟು ಹೋದ ಮನೆ!! ನಮ್ಮ ಪಾಲಿಗೆ ದೇವಸ್ಥಾನ!! ಲಕ್ಷ ಲಕ್ಷ ನೆನಪುಗಳ ಖಣಜ!! ಅದೋ ನೋಡಿ ಅಲ್ಲಿ ಕಾಣುತ್ತಿದೆಯಲ್ಲಾ? ಅದೇ ನಮ್ಮನೆ!!
ಹೀಗೆ ಸಾವಿರ ಸಾವಿರ ಘಟನೆಗಳು ಚಿತ್ರಪಟದಂತೆ ಬರುತಿರಲು ನಾನು ಮಾತ್ರ ನನ್ನ ನೆನಪುಗಳಾಚೆಯಿಂದ ಬರುವುದಿಲ್ಲ. ನಮ್ಮ ತೋಟ, ಶಾಲೆ, ದೇವಸ್ಥಾನ, ಹರಳೀಕಟ್ಟೆ, ಮೈದುಂಬಿ ಹರಿಯಿತ್ತಿದ್ದ ಕೆರೆ, ಸಂತೆ ಬೀದಿ, ಗರಡೀಮನೆ, ನೇಯ್ಗೆ ಬೀದೀ, ಅಲ್ಲಿನ ಕೈಮಗ್ಗಗಳ ಶಬ್ದ, ಸಾಬರ ವಟಾರ, ಒಕ್ಕಲಿಗರ ಓಣಿ, ಬ್ರಾಹ್ಮಣರ ಮಂತ್ರಘೋಷ, ಕುಂಚಿಟಿಗರು, ಕುರುಬರು..ಒಬ್ಬರೇ ಇಬ್ಬರೇ? ಸಾವಿರಾರು ಜನ, ಅವರ ಜೀವನ ಒಟ್ಟಿಗೇ ಹೋಯ್ತಲ್ಲಾ ಈ ಹೆದ್ದಾರಿ ಎಂಬ ಮಹಾಮಾರಿಗೆ!!!?? ಹೌದು ಹೆದ್ದಾರಿ ಅಗಲೀಕರಣಕ್ಕೆ ನನ್ನ ಇಡೀ ಹಳ್ಳಿಯೇ ನಿರ್ನಾಮವಾಗಿ ಹೊಯ್ತು! ಇಲ್ಲೀಗ ಮಹಾ ಚತುಷ್ಪತ ರಸ್ತೆಯೆದ್ದು ನಿಂತಿದೆ ನಮ್ಮೆಲ್ಲರ ಜೀವಂತ ಹೆಣಗಳ ಮೇಲೆ. ಶ್ರೀಮಂತರು ಇಲ್ಲಿ ಜೀವಿಸ ತೊಡಗಿದ್ದಾರೆ ಕಾರು ಮುಂತಾದ ವಾಹನದಲ್ಲಿ ಓಡಾಡುವ ಮೂಲಕ, ನಾವಿಲ್ಲಿ ಸತ್ತಿದ್ದೇವೆ ನಮ್ಮದೇ ಜಾಗದಲ್ಲಿ ನಮಗೇ ನಮ್ಮ ಮಣ್ಣು ಸಿಗದ ಮೂಲಕ!
ನನ್ನದೊಬ್ಬನದೇ ವ್ಯಥೆಯಲ್ಲ ಇದು, ನಮ್ಮೆಲ್ಲರದು. 'ಕಾರು ' 'ಭಾರು ' ಮಾಡುವರು ಯಾವಾಗ ಬಂದು ನಮ್ಮ ಜೀವನಕ್ಕೆ ಕೊಡಲಿಯಿಡುತ್ತಾರೋ ಗೊತ್ತಿಲ್ಲ. ಹುಷಾರು!
ಅದೋ ನೋಡಿ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ನನ್ನ ಮನೆ ನನ್ನ ಕೈಬೀಸಿ ಕರೆಯುತ್ತಿದೆ, ನಾನೀಗ ಅದರ ಮಡಿಲಿಗೆ ಹೋಗಿ ಸೇರುತ್ತಿದ್ದೇನೆ. ನನ್ನನ್ನು ಯಾರೂ ತಡೆಯಲಾಗದು.
..........................
ಮೋಹನ್ ಕುಮಾರ್ ಡಿ ಎನ್

No comments:
Post a Comment